ಪರಿಕಲ್ಪನೆ  ಮತ್ತು ಧ್ಯೇಯೋದ್ದೇಶದ ವಿವರಣೆ

ಪರಿಕಲ್ಪನೆ

ಭಾರತದ ಸಂಪತ್ತಿನ ಸೃಷ್ಟಿ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಗತಿಯನ್ನು ಅನ್ವಯಿಸಿ.  ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿಶ್ವದರ್ಜೆಯ ಶಿಕ್ಷಣವನ್ನು ನೀಡಿ, ಸಂಶೋಧನಾ ಶ್ರೇಷ್ಠತೆಯ ಅನ್ವೇಷಣೆ ಮತ್ತು ನಾವೀನ್ಯದ ಪ್ರಚಾರದ ಮೂಲಕ ವಿಶ್ವದ ಅಗ್ರಗಣ್ಯ ಶೈಕ್ಷಣಿಕ ಸಂಸ್ಥೆಗಳ ಪೈಕಿ ಒಂದಾಗುವ ಗುರಿಯನ್ನು ಐಐಎಸ್ಸಿ ಹೊಂದಿದೆ.

ಧ್ಯೇಯೋದ್ದೇಶದ ವಿವರಣೆ

ಮೇಲಿನ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಲು ಪೂರಕವಾಗುವಂತೆ ಧ್ಯೇಯೋದ್ದೇಶಗಳು:

  • ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದ ಸಂಶೋಧನೆಯಲ್ಲಿ ವಿಶ್ವದರ್ಜೆಯ ಉನ್ನತ ಶಿಕ್ಷಣವನ್ನು ಪ್ರಚೋದಿಸುವುದು.
  • ಹೆಚ್ಚಿನ ಪರಿಣಾಮದ ಸಂಶೋಧನೆ ನಡೆಸುವುದು, ಹೊಸ ಜ್ಞಾನವನ್ನು ಉತ್ಪಾದಿಸುವುದು, ಮತ್ತು ಈ ಜ್ಞಾನವನ್ನು ಪ್ರಕಟಣೆಗಳ ಮೂಲಕ ಉನ್ನತ ನಿಯತಕಾಲಿಕಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ಪ್ರಚಾರ ಮಾಡುವುದು.
  • ರಾಷ್ಟ್ರೀಯ ಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನದ ಉದ್ಯಮಶೀಲತೆಗಳ ಯಶಸ್ಸಿಗೆ ಅನುಗುಣವಾಗಿ ಸಿಬ್ಬಂದಿಗಳ ನೈಪುಣ್ಯತೆಯನ್ನು ಅಳವಡಿಸುವುದು.
  • ಪರಿಣಿತಿಯನ್ನು ಸೃಷ್ಟಿಸಲು ವಿವಿಧ ಕ್ಷೇತ್ರಗಳಲ್ಲಿ ಆಳವಾದ ಜ್ಞಾನವನ್ನು ಕೈಕೊಳ್ಳುವುದು. ಉದ್ಯಮ ಹಾಗು ಸಮಾಜದ ಅಭಿವೃದ್ಧಿಗೆ ಅಂತಹ ಪರಿಣಿತಿಯನ್ನು ಬಳಸಿಕೊಳ್ಳುವುದು.